You are called to make
a diffrence
ಸಂತ ಜಾನ್ ಬೋಸ್ಕೊರವರ ಸಲೇಶಿಯನ್ ಸಭೆಯು, ಬಡ ಹಾಗೂ ನಿರ್ಗತಿಕ ಯುವಕರ ಒಳಿತಿಗೋಸ್ಕರ ಸೇವೆ ಸಲ್ಲಿಸುವ ಸಭೆಯಾಗಿದೆ. ಜಗದ 133 ದೇಶಗಳಲ್ಲಿ ವ್ಯಾಪಿಸಿ ಕಾರ್ಯ ನಿರ್ವಹಿಸುತ್ತಿರುವ ಸಲೇಶಿಯನ್ನರು ಸುಮಾರು 200 ವರುಷಗಳಿಂದ ಅನೇಕ ಯುವಜನರ ಕತ್ತಲು ಕವಿದ ಬಾಳಲ್ಲಿ, ಬೆಳಕನ್ನು ತಂದಿದ್ದಾರೆ. ಕ್ರಿಸ್ತರ ಹೆಜ್ಜೆಗಳಲ್ಲಿ ಹೆಜ್ಜೆಗಳನ್ನಿಡುತ್ತಾ, ಪ್ರೀತಿ ಹಾಗೂ ಮಮತೆಯನ್ನು ತೋರಿಸುವ ಗುರುಗಳು ಮತ್ತು ಸಹೋದರರ ಒಂದು ಸುಂದರ ಸಭೆ. ಸೇಲೇಶಿಯನ್ ಬೆಂಗಳೂರು ಪ್ರಾಂತ್ಯ, ಕರ್ನಾಟಕ ಹಾಗೂ ಕೇರಳ ರಾಜ್ಯಗಳನ್ನು ಒಳಗೂಡಿದೆ. ದೇವರ ಕರೆಯನ್ನು ಆಲಿಸಿ, ಯುವಕರ ಸೇವೆಯನ್ನು ಮಾಡಲು ನೀವು ಇಚ್ಛಿಸುವಿರೊ? ಈ ಬೃಹತ್ ಸಭೆಯ ಅಂಗವಾಗಿ ಉನ್ನತ ಮಾರ್ಗದರ್ಶಿಯಾಗಲು ಬಯಸುತ್ತಿರಾದರೆ? ಇಂದೇ ಸಂಪರ್ಕಿಸಿ ಪಾ. ಲಾರೆನ್ಸ್ ಎಸ್. ಡಿ. ಬಿ.
ಮೊಬೈಲ್ ಸಂಖ್ಯೆ.